"ನೆನಪುಗಳ ನೆನಪು ಸದಾ ನೆನಪಾಗಿರಲು"
ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ
ನೀವು ಬಿಡುವ ಅಪರೂಪದ ಪದಗಳ ಬಾಣ
ಅಲ್ಲೊಂದು ಕಥೆ ಕವನ ಕಾಲ ಹರಣ
ಅಲ್ಲೊಮ್ಮೆ ನಿಮ್ಮ ಪರಿಚಯದ ಕ್ಷಣ
ಅಂಧ ದೀಪಾವಳಿಯ ಆ ಒಂದು ಕವನ
ಮೈಮರೆತು ಎಲ್ಲೋ ಹೋಯಿತು ಮನ
ಅದರ ನಂತರ ಓದುತ್ತಾ ಪ್ರತಿ ದಿನ
ಬಾನೆತ್ತರದ ಭಾವನೆಗಳ ನಿಮ್ಮ ಕವನ
ಮತ್ತೆ ಮಾಡಿದಿರಿ ದಂಡಯಾತ್ರೆಯ
ಹೇಳಿದಿರಿ ನಿಮ್ಮ ಗೆಳತಿಯರ ಪರಿಚಯ
ಹಳೇ ಭಾವನೆಗಳಿಗೆ ಹೊಸ ಪ್ರೀತಿಯ
ಸೇರಿಸಿ ಬರೆದಿರಿ ಮಜವಾದ ಕವಿತೆಯ
ಮರಗಿಡಗಳ ಮೇಲಿನ ನಿಮ್ಮ ಪ್ರೀತಿ
ಆಗಿತ್ತು ಅಲ್ಲಿ ಕವನಕ್ಕೆ ಹೊಸ ಸಂಗತಿ
ಗಿಂಡಿಯ ಮಾಣಿ , ಪಿಕಲಾಟದ ಪಜೀತಿ ಜೀ ಹುಜೂರ್
ಇನ್ನು ನಮ್ಮನ್ನು ಕಾಡುತೈತಿ ಹೊಸ
ರಾಮಾಯಾಣದ ಸುಗ್ರೀವರಂತೆ
ಎಲ್ಲರೂ ಕಾಣುವರಂತೆ ನಿಮ್ಮದಿಲ್ಲಿ ಚಿಂತೆ
ನಿಮ್ಮ ಮಾತುಗಳಲ್ಲಿ ನೀವು ಗುರುವಿನಂತೆ
ಅದೇನೇ ಇರಲಿ ಕೊನೆಯಲ್ಲಿ ಮಗುವಿನಂತೆ
ಮರ ಹಿಡಿದ ನಿಮ್ಮನ್ನು ಮಗುವಿನಂತೆ ಕಂಡಿದೆ
ನನ್ನ ಮನಸ್ಸಿನ ನೆನಪುಗಳು ಕವನವಾಗಿದೆ
ಬರೆಯಲು ಹಲವು ದಿನಗಳ ಯೋಚನೆ ಮಾಡಿದೆ
ನೆನಪುಗಳ ನೆನಪು ಸದಾ
ನೆನಪಾಗಿರಲು ಕವನ ಬರೆದೆ.. :)
|| ಪ್ರಶಾಂತ್ ಖಟಾವಕರ್ ||
10 comments:
ನಿಮ್ಮ ಈ ಪ್ರೀತಿಯ ಸ್ನೇಹ ವಿಶ್ವಾಸ ಮೆಚ್ಚುಗೆ ಮತ್ತು ನಿಮ್ಮ ಆಶೀರ್ವಾದಗಳೇ .. ನಾವು ಭಾವನೆಗಳ ಬರೆಯಲು ಸಾಧ್ಯ.. ಸರ್.. ನೆನಪುಗಳ ನೆನಪನ್ನು ಕಾಪಾಡಲು ಮೊದಲ ಪ್ರಯತ್ನ.. ಆ ನೆನಪುಗಳಿಗೆ ಮತ್ತಷ್ಟು ನೆನಪನ್ನು ಸೇರಿಸಲು.. ಎಂದೂ ನಿಲ್ಲುವುದಿಲ್ಲ ನಮ್ಮ ಯತ್ನ..
ನಿಮಗೂ ಕೂಡ ಹೃತ್ಪೂರ್ವಕ ಧನ್ಯವಾದಗಳು ಸರ್.. :)
ಹ ಹ ಹ ಪ್ರಶಾಂತ್ ಬಹಳ ಒಳ್ಳೆಯ ಕೊಡುಗೆ ಕೊಟ್ಟಿದ್ದೀರ , ಬದರಿನಾಥ್ ಪಳವಲ್ಲಿ ಅದಕ್ಕೆ ಅರ್ಹರೂ ಕೂಡ. ನಿಮ್ಮ ಒಳ್ಳೆಯ ಕಾರ್ಯಕ್ಕೆ ನನ್ನ ಅಭಿನಂದನೆಗಳು.
ಹ ಹ.. ಚೆನ್ನಾಗಿದೆ ಪ್ರಶಾಂತರೇ.. ಶಾಲು ಹೊದ್ದುಕೊಳ್ಳಲು ಯೋಗ್ಯರೂ ಕೂಡ ಪಲವಳ್ಳಿಯವರು.. ಪ್ರರಸ್ಪರ ಬೆನ್ನುತಟ್ಟುವ ಈ ಪ್ರಯತ್ನಕ್ಕೆ ಮತ್ತೊಂದು ಅಭಿನಂದನೆ :-)
ನಾವೆಲ್ಲಾ ಸೇರಿ ಬದರಿಯವರಿಗೆ ಸನ್ಮಾನ ಮಾಡುವ ಕಾಲ ಬೇಗ ಬರಿಲಿ.ಬದರಿಯವರ ಅಭಿಮಾನಿ ಬಳಗ ಬೆಳೆಯುತ್ತಿದೆ.ಬದರಿ,ಇದು ನಿಮ್ಮ ಕಿರೀಟದಲ್ಲಿ ಮತ್ತೊಂದು ಗರಿ!ಅಭಿನಂದನೆಗಳು.
ಸೋದರ ಪ್ರಶಾಂತ್ ನಿಮ್ಮ ಪ್ರಶಸ್ತಿ ಪತ್ರ ನೋಡಿ ಹೃದಯ ತುಂಬಿ ಬಂತು, ಬಹಳ ಒಳ್ಳೆಯ ಕೆಲಸ ಮಾಡಿದ್ದಿರಿ
ಬದ್ರಿಯವರು ನಿಮ್ಮ ಪ್ರಶಂಸೆಗೆ ಮತ್ತು ಪ್ರಶಸ್ತಿಗೆ ಅರ್ಹರು ಕೂಡ; ತುಂಬ ಸಂತೋಷ ಆಯಿತು
ತುಂಬಾ ಖುಷಿ ಆಯ್ತು ನಿಮ್ಮ ಸ್ನೇಹಿತರ ಪ್ರಶಸ್ತಿ ಪತ್ರ ನೋಡಿ... ಇದೇ ರೀತಿ ಸದಾ ಸ್ನೇಹದ ಪ್ರಶಸ್ತಿಗಳು ನಿಮ್ಮದಾಗಲಿ
ಮನಸ್ಸು ಮನಸ್ಸಿನ ಭಾವನೆಗಳು ಅಂದರೆ ಹಾಗೆ, ಅವುಗಳು ಎಷ್ಟೇ ದೂರವಿರಲಿ, ಸಂಪರ್ಕದಲ್ಲಿರಲಿ, ಇಲ್ಲದಿರಲಿ.....ಹೇಗಿದ್ದರೂ ನಮಗೆ ಅರಿವಿಲ್ಲದೆ ಅವು ಪರಸ್ಪರ ಸಂವಾದಿಸುತ್ತಿರುತ್ತವೆ, ಅದು ಸೂಕ್ಷ್ಮ ಮನಸುಗಳಿಗೆ ಮಾತ್ರ ಸಾಧ್ಯವಾಗುವ ಪ್ರಕ್ರಿಯೆ.....ಮತ್ತಷ್ಟು ಮಗದಷ್ಟು ಪ್ರಶಸ್ತಿಗಳು ನಿಮ್ಮವಾಗಲಿ
ಪ್ರಶಾಂತರು ಕವನರೂಪದ ಪ್ರಶಸ್ತಿಯನ್ನೇ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರಶಸ್ತಿಪಾತ್ರ ಬದರಿನಾಥರಿಗೂ ಅಭಿನಂದನೆಗಳು.
avaru baredaddaralli atishayokti enU illa anisatte...
nijakku nimma kaviteya parichaya ellarigu aagabeku....
adu namma bayake...
Prashantara pallavi..
Palavalli advitiya adbuta kavi
Prashant sir nimma Handwriting super o super.........!!!!!!!!!!!!!!!
Nim photo nu ashte muddagide Telugu'JAGADAM' Movie fame Ram tara.....
Post a Comment