Tuesday, April 3, 2012

ಸಂತೆಯಲಿ ಮನೆ ಮಾಡಿ...!!!

ಅಂದ ಹಾಗೆ, ಈ ನಡುವೆ ನನ್ನ ಮನೆ ಎಂಬುದು "ಸಂತೆಯಲ್ಲಿ ಮನೆಯ ಮಾಡಿ..." ಅನ್ನೋ ತರಹ ಆಗೋಗಿದೆ!


ತುಂಬಾ ಸುಸ್ತಾಗಿ ಮನೆಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಬಂದು, ನಾಲ್ಕು ತುತ್ತು ಶಾಸ್ತ್ರಕ್ಕೆ ಅಂತ ತಿಂದು ಇನ್ನೇನು ಮಲಗಬೇಕು ಅಂತ ಹಾಸಿಗೆಗೆಗೆ ಬಿದ್ದರೆ, ಹಿಂದಲ ಮನೆಯವರ ಮೈಕ್ ಸೆಟ್ ಶುರೂ.


ಆಂಧ್ರ ಕಡೆ ರೆಡ್ಡಿಗಳೂ ಅಂತ ಕಾಣುತ್ತೆ. ಅದೇನು ಕುರುಡು ಪ್ರೀತಿಯೋ ಕಾಣೆ! ಆಂಧ್ರಪ್ರದೇಶದ ಮಾಜೀ ಮುಖ್ಯ ಮಂತ್ರಿ ದಿವಂಗತ. ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಗುಣಗಾನ ಮಾಡುವ ಜಾನಪದ ಶೈಲಿಯ ಹಾಡನ್ನು ಜೋರಾಗಿ ಹಾಕಿಬಿಡುತ್ತಾರೆ. ಅಲ್ಲಿಗೆ ನನ್ನ ಎಡಗಿವಿ ಮಟಾಷ್!


ಇನ್ನು ಬಲಗಿವಿಗೆಗೆ ಯಾಕೆ ಪುರಸೊತ್ತೂ ಅಂತ ಆ ಕಡೆ ಮನೆಯ ಒರಿಸ್ಸಾ ಮುದುಕ ತಾನೇನು ಕಮ್ಮಿ ಅಂತ ಜೋರಾಗಿ ಟೀವಿ ಹಾಕುತ್ತಾನೆ. ಅಲ್ಲಿಗೆ ನನ್ನ ಎರಡೂ ಕಿವಿಗಳ ತಮಟೆಗಳು ಕಿತ್ತು ಊರಗಲವಾಗಿರುತ್ತವೆ.


ಮೊದಲೇ ಬೇಸಿಗೆ, ಜೊತೆಗೆ ಈ ತಾರಕ ಸ್ವರದ ಕಿರಿಕಿರಿ ನನ್ನ ನಿದ್ದೆ ಅಸ್ತಗತವಾಗಿ, ಬದುಕು ಹರಹರಾ ಎನ್ನುವಂತಾಗಿದೆ...


ನಡು ರಾತ್ರಿ ಯಾವಾಗಲೋ ಅವರಿಗೇ ಬೇಜಾರಾದಾಗ ಬ್ಯಾಂಡ್ ಸೆಟ್ ಬಂದ್ ಆದರೆ ನನಗೂ ಒಸೀ ನಿದ್ದೆ.


ಇನ್ನೂ ಬೆಳಗಿನ ಕಥೆ ಇನ್ನೂ ಘೋರ....


ನಾಲ್ಕು ಗಂಟೆ ಸುಮಾರಿಗೆ ಪಕ್ಕದ ಮನೆಯ ನಡು ವಯಸಿನ ಹೆಂಗಸಿಗೆ ಶಿರಡಿ ಸಾಯಿ ಬಾಬಾ ಅವರ ಮೇಲೆ ಭಕ್ತಿ ಉಕ್ಕಿ ಬಂದು, ಆಕೆ ಆಡಿಯೋ ಪ್ಲೈಯರ್ ಹಚ್ಚಿಟ್ಟು ಬಿಟ್ಟರೆಂದರೆ ಅಲ್ಲಿಗೆ ನನ್ನ ನಿದ್ರೆಗೆ ಫುಲ್ ಸ್ಟಾಪ್...


ಅಯ್ಯೋ ನನ್ನ ಮನೆ ಯಾಕೋ "ಸಂತೆಯಲಿ ಮನೆ ಮಾಡಿ....!!!!" ಅನ್ನೋ ತರಹ ಆಗಿದೆ ಸ್ವಾಮಿ.

(ಚಿತ್ರ ಕೃಪೆ : ಅಂತರ್ಜಾಲ)

10 comments:

tiru said...

ತುಂಬಾ ಸೂಪರ್ ನಿಮ್ಮ ಲೇಖನ. ಇದು ಯಾರಿಗೂ ತಿಪ್ಪಿದಲ್ಲ ಈ ಸಿಟೀಲಿ. ಒಂದು ಕೆಲಸ ಮಾಡಿ ನಿಮಗೆ ಬೇಕಾಗಿರೋ ಹಾಡನ್ನು ಒಂದು MP3 player ನಲ್ಲಿ ಹಾಕ್ಕೊಂಡು ಕಿವೀಗಿ ಹಾಕ್ಕೊಂಡು ಮಲಕ್ಕೊಳ್ಳಿ. ಆಗ ಆ ಶಬ್ದ ಮಾತ್ರ ಕೆಳುಸುತ್ತೆ. ನಿದ್ದೆ ಬಂದಮೇಲೆ ಯಾವ ಶಬ್ದವೂ ಕೇಳಿಸೋಲ್ಲ. ಹೇಗಿದೆ ಐಡಿಯಾ. ಬೆಸ್ಟ್ ಆಫ್ ಲಕ್

ಕಾವ್ಯ-ಕಡಲಿನಲೆಗಳು...! said...

ayyo.. nimgottilva.. sir.. chinthe.. illadavarige.. santheyallu.. nidre.. baruttante.. haagaagi.. chinte maadod kammi maadi, mane sante irli nijavaada santeyallu kooda nemmadiya nidre maadbahudu...

thumba chennaagide sir.. nimma santheya mane...

ವಸಂತ್ ಕುಮಾರ್ said...

ಇನ್ನೂ ಇವೆ ಮನೆ ಬಿಟ್ಟು ಆಫೀಸಿಗೆ ಅಂತ ಬಸ್ ಹತ್ತಿದರೆ ಎಫ್ ಎಂ ರೇಡಿಯೋ ಗೋಳು, ಪಕ್ಕದ ಪ್ರಯಾಣಿಕನ ಮೊಬೈಲಿನಿಂದ ಎಮ್ ಪಿ ೩ ಹಾಡುಗಳ ಗೋಳು ಮತ್ತು ಮೊಬೈಲ್ ಯಾಕಿದೆಯೋ ಅನ್ನುವಷ್ಟರ ಮಟ್ಟಿಗೆ ಜೋರಾದ ಸಂಭಾಷ್ಣೆಯ ಕೊರೆತ... ಪ್ರಪಂಚಂ ಶಬ್ದಮಯಂ... :)))

Mohan V Kollegal said...

ಚೆನ್ನಾಗಿದೆ ಲೇಖನ.... ತಿರುಮಲೈ ಸರ್ ಹೇಳಿದ ಉಪಾಯ ಚೆನ್ನಾಗಿದೆ....

Dr.D.T.Krishna Murthy. said...

ಬದರಿ;ಕಷ್ಟ!!ಬದುಕು ಕಡುಕಷ್ಟ !!!

sunaath said...

ಬದರಿನಾಥರೆ,
ಇದು (ಅ)ನಾಗರಿಕ ಸಮಾಜದ ಲಕ್ಷಣ!

ಸಂಧ್ಯಾ ಶ್ರೀಧರ್ ಭಟ್ said...

Tumba chennagide Sir.. Adare nimma shtitinenadare paapa annista ide..

Raja narasimhan said...

Kavirayarige kivi-GAYA(halagoitu)kele nagu ukki bartide....!!!!
Enjoy each and every single moments of your life...!
ide Jeevana
May god bless u...!!!!!!!!!!!!1

Raja narasimhan said...

andahaage shstrakenu tinbedi hotte tumba uta madi....!!!!!!1111111

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಮೊದಲು ಎಲ್ಲಿ ಈ ವಿಷಯ ಕೇಳಿದ್ದು ಅನ್ನೋದೇ ನೆನಪಿಗೆ ಬರ್ತಾ ಇಲ್ಲಾ .. ಅಥವಾ ಇಲ್ಲೇ ನಿಮ್ಮ ಬ್ಲಾಗ್ ಅಲ್ಲಿ ಓದಿ , ಟೈಮ್ ಇಲ್ಲಾ ಅಂತಾ ಕಾಮೆಂಟ್ ಹಾಕದೇ ಇರಬಹುದೇನೋ ಸರ್ .. ಆದರೆ ಈ ವಿಚಾರ ತುಂಬಾ ಪರಿಚಿತ ಅನ್ನುವ ಭಾವನೆಗಳನ್ನು ಮೂಡಿಸುತ್ತಿದೆ .. ಏನೋ ಒಂದು ವಿಚಿತ್ರ ಸೆಳೆತ ಇದೆ ಈ ಲೇಖನದಲ್ಲಿ ಇದು ನೈಜತೆಗೆ ಹತ್ತಿರ ಅಂತಲೂ ಆಗಿರಬಹುದು .. ಆದರೆ ನೀವು ವಾಸ ಮಾಡುವ ಸ್ಥಳದಲ್ಲಿ ಈ ರೀತಿಯ ಶಬ್ಧಗಳನ್ನು ಕೇಳಿಲ್ಲಾ.. ಮತ್ತು ಈ ಘಟನೆಯನ್ನು ಯಾವುದೇ ಸಿನಿಮಾ ಧಾರಾವಾಹಿಗಳಲ್ಲಿ ನೋಡಿಲ್ಲಾ.. ಆದರೂ ಈ ಮೊದಲೇ ಎಲ್ಲೋ ತಿಳಿದಂತೆ , ಕಂಡಂತೆ , ನೋಡಿದಂತೆ , ಓದಿದಂತೆ .. ಮ್... ಏನಿರಬಹುದು .. ಏಕೆ ಹೀಗೆ ಅನ್ನೋ ವಿಚಿತ್ರದಲ್ಲೇ ಮುಂದಿನ ಲೇಖನ ಓದಲು ಹೋಗೋಣ ಅನ್ನಿಸಿದರೂ ಸಹ ಮತ್ತೆ ಇದೇಕೋ ಇಲ್ಲೇ ಸೆಳೆದು ತರುತ್ತಿದೆ .. ಇದರಲ್ಲಿನ ಆ ಆಕರ್ಷಣೆಯ ವಿಚಿತ್ರ ಶಕ್ತಿಯ ಕಾರಣ ಏನು ಎಂಬುದೇ ಇಲ್ಲಿ ಒಂದು ನಿಗೂಢ ವಿಸ್ಮಯ .. ಸರ್.. :)