Sunday, December 4, 2011

ಓಶೋ! : ಸರಿಯೇ ತಪ್ಪೇ?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಧ್ಯಾನದ ಮುಖೇನ ಮನಃ ಶುದ್ದೀಕರಣದ ಬಗ್ಗೆ ಆ ಲೇಖಕರು ಪ್ರಸ್ತಾಪಿಸುತ್ತಾ, ಓಶೋರವರ ಬೋಧನೆಗಳನ್ನು ಉದಾಹರಿಸಿದರು. ಇದು ಭಾರೀ ಚರ್ಚೆಗೆ ಗ್ರಾಸವಾಯಿತು.

ಓದುಗರೊಬ್ಬರು ಕಮೆಂಟಿಸುತ್ತಾ ಓಶೋ ಸ್ಥಿತಪ್ರಜ್ಞರಲ್ಲ, ಅವರು ಹೊಸ ಆವಿಷ್ಕಾರವನ್ನು ಮಾಡಲು ಹೊರಟು ಗುರಿ ತಲುಪದೇ ಇದ್ದವರು. ಎಂದು ಅಭಿಪ್ರಾಯವನ್ನು ದಾಖಲಿಸಿದರು. ಹೀಗೆ ಯಾವುದನ್ನೂ ಸಾರಾಸಗಟಾಗಿ ತಿರಸ್ಕರಿಸುವುದು ಪೂರ್ವಾಗ್ರಹ ಪೀಡಿತ ಕಲ್ಪನೆ ಅಂತ ನನ್ನ ಅನಿಸಿಕೆ.

ಅವರ ಆಶ್ರಮದ ಅಂತರಂಗದ ಊಹಾಪೋಹ ಸುದ್ದಿಗಳು, ಐಷಾರಾಮಿ ಜೀವನ ಶೈಲಿ ಮತ್ತು ಕಾಸ್ಟ್ಲೀ ಕಾರುಗಳ ಪ್ರೀತಿಗಳ ಹೊರತಾಗಿಯೂ ಅವರ ಅಪಾರ ಙ್ಞಾನ ಸಂಪತ್ತು ಮತ್ತು ಅವರ ನೂರಾರು ಆದ್ಯಾತ್ಮಿಕ ಪುಸ್ತಕ ಬರವಣಿಗೆಯನ್ನು ಗೌರವಿಸಬೇಕಾಗುತ್ತದೆ.

ಶಾಸ್ತ್ರ, ಧರ್ಮ, ಗುರು, ವಾಸ್ತು, ಜ್ಯೋತಿಷ್ಯ, ಸಂಗೀತ ಮತ್ತು ಸೌಂದರ್ಯ ಹೀಗೆ ಅವರವರ ಭಾವನೆಗಳಿಗೆ ಮತ್ತು ನಂಬಿಕೆಗೆ ಬಿಟ್ಟದ್ದು. ಯಾವುದನ್ನು ನಂಬ ಬೇಕು ಯಾರನ್ನು ಒಪ್ಪಬೇಕು ಎನ್ನುವುದು ಪ್ರತಿಯೊಬ್ಬ ಮಾನವನ ವಯುಕ್ತಿಕ ಹಕ್ಕು.

ಓಶೋ ಪರ ವಿರೋಧಿ ಚರ್ಚೆಗಳಿಗೆ ಇದು ವೇದಿಕೆಯಾಗ ಬಾರದು. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ವಿಶ್ಲೇಷಿಸಿ ಸ್ವೀಕರಿಸಬೇಕೆ ಹೊರತು, ಅದರ ಮೂಲವನ್ನು ಕೆದಕುತ್ತಾ ಕೂರ ಬಾರದು.

ಓಶೋ ತುಂಬಾ ಓದಿಕೊಂಡವರು. ಅವರು ಜಗತ್ತಿನ ಙ್ಞಾನ ಮೂಲಗಳನ್ನು ಅರ್ಥೈಸಿಕೊಂಡವರು. ಅದನ್ನೆಲ್ಲ ಕ್ರೋಢೀಕರಿಸಿ ಪುಸ್ತಕ ಮತ್ತು ದ್ವನಿ ಮುಖೇನ ಇಂದಿಗೂ ಪ್ರಚಲಿತದಲಿ ಇಟ್ಟವರು.
ಪ್ರತಿ ಗುರುವು ಸ್ವಯಂಭು ಗುರುವಾಗಲು ಸಾಧ್ಯವೇ ಇಲ್ಲ. ಆತನದೂ ನಿರಂತರ ಶಿಷ್ಯ ವೃತ್ತಿ. ತಾನು ಗ್ರಹಿಸಿದ, ಕಲಿತ ಅಥವಾ ಓದಿಕೊಂಡ ಙ್ಞಾನವನ್ನು ಆತ ಹಂಚಲು ಕೂರುತ್ತಾನೆ. ಹಲವು ಮೂಲಗಳಿಂದ ನಾವು ಓದಿಕೊಳ್ಳಲಾರದ ಙ್ಞಾನವನ್ನು ಆತ ಶುದ್ಧೀಕರಿಸಿ ನಮಗೆ ಗುಕ್ಕು ನೀಡುತ್ತಾ ಹೋಗುತ್ತಾನೆ.

ಬೋಧನೆಯಲಿ ಸತ್ವವಿಲ್ಲದಿದ್ದರೆ ಅದು ಬೇಗನೆ ಅಪ್ರಸ್ತುತವಾಗಿ ನಶಿಸಿ ಹೋಗುತ್ತದೆ. ಪೊಳ್ಳು ಮಾರಿಕೊಳ್ಳುವ ಡೋಂಗಿ ಗುರುಗಳ ಮದ್ಯೆ ತೀರಿಕೊಂಡು ದಶಕಗಳು ಕಳೆದರೂ ಇನ್ನೂ ಪ್ರಸ್ತುತದಲ್ಲೇ ಉಳಿಯಲು ಅವರಲ್ಲೇನೋ ಗಟ್ಟಿ ಮಾಲು ಇರಬೇಕಲ್ಲವೇ!

ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಗೀತಾಮೃತ ಏಕೆ ಬೋಧಿಸಿಕೊಂಡು ಕೂತರು ಎಂದು ಕ್ಯಾತೆ ತೆಗೆದರೆ, ವಾದಕ್ಕೆ ಬೀಳುವುದೇ ವ್ಯರ್ಥ!

ಈ ಲೇಖನಕ್ಕೆ ಕಾರಣವಾದದ್ದು ಡಾ|| ಡಿ.ಟಿ.ಕೆ. ಮೂರ್ತಿಯವರ ಈ ಲೇಖನ. ಬೋನಸ್ ಆಗಿ ಆ ಲೇಖನಕ್ಕೆ ಇತರರು ಕಾಮೆಂಟುಗಳನ್ನೂ ಓದಿರಿ:

"ಧ್ಯಾನದಲ್ಲಿ ಫ್ಲಷ್ ಮಾಡಿ!"
http://dtkmurthy.blogspot.com/2011/12/flush-meditatively.html

10 comments:

sunaath said...

ಬದರಿನಾಥರೆ,
ಸರಿಯಾದ ವಿಚಾರವನ್ನು ಮಂಡಿಸಿರುವಿರಿ. ಬೆಳಕು ಎಲ್ಲಿಂದ ಬಂದರೇನು? ಪ್ರಯೋಜನ ಪಡೆಯುವದೇ ಜಾಣತನ!

ಉಮಾ ಪ್ರಕಾಶ್ said...

ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಏಕೆ 'ಭಗವದ್ ಗೀತೆ' ಬೋಧಿಸಿಕೊಂಡು ಕೂತರು ಅನ್ನೋದು ಮೂರ್ಖ ತನವೇ ಸರಿ ! ಬೆಳಕು ಎಲ್ಲಿಂದ ಬಂದರೇನು? ಮುಖ್ಯ 'ಬೆಳಕು' ಅಲ್ಲವೇ ?

nimmolagobba said...

ಕೆಲವರ ಮನಸ್ಥಿತಿ ಹೀಗೇನೆ, ಏನೂ ಮಾಡಲು ಆಗುವುದಿಲ್ಲ .ಬ್ಲಾಗಿನ ಒಳ್ಳೆಯ ಅಂಶಗಳನ್ನು ಹೆಕ್ಕಿಕೊಳ್ಳುವುದು ಒಳ್ಳೆಯದು.ಕಾಣದ ಅಥವಾ ಪೂರ್ವಾಗ್ರಹ ಪೀಡಿತರಾಗಿ ಯಾವುದೋ ವ್ಯಕ್ತಿಯನ್ನು ತೆಗಳುವ ಸಲುವಾಗಿ ಇನ್ನೊಬ್ಬರನ್ನು ಹೊಗಳುವ ಸಲುವಾಗಿ ನಮ್ಮ ಅನಿಸಿಕೆ ಇರಬಾರದು. ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಅಂಶ ಸರಿಯಾಗಿದೆ. ರಜನೀಶರ ಕಾರು , ಆಶ್ರಮ ಸಿರಿವಂತಿಕೆ, ಶೋಕಿ ಇವುಗಳಬಗ್ಗೆ ಮಾತ್ರ ಆಸಕ್ತಿಯಿಂದ ತಿಳಿದನಾವು ಅವರ ಅಧ್ಯಯನ,ಜ್ಞಾನ, ಅವರ ಅಭಿಪ್ರಾಯ ,ಸಾಧನೆ ಇವುಗಳಬಗ್ಗೆ ಸರಿಯಾಗಿ ತಿಳಿಯದೆ ಅವರನ್ನು ಕಾಮುಕ ಸ್ವಾಮೀ ಶೋಖಿ ಸ್ವಾಮೀ, ಇತ್ಯಾದಿಯಾಗಿ ಬ್ರಾಂಡ್ ಮಾಡಿದ್ದು ದುರಂತ.ಒಂದೊಂದು ನದಿಯೂ ಹರಿವ ಹಾದಿ ಬೇರೆ ಬೇರೆ ಆದರೆ ತಲುಪುವ ಗುರಿ ಸಾಗರವೇ ತಾನೇ , ಹಾಗೆ ಸಾಧಕರೂ ಕೂಡ ತಮ್ಮದೇ ಹಾದಿಯಲ್ಲಿ ಸಾಗುತ್ತಾರೆ.ಅವರ ಹಾದಿ ಇಷ್ಟವಾಗದಿದ್ದರೆ ಸುಮ್ಮನಿರೋಣ ತೆಗಳುವುದು ಬೇಡ ಅಲ್ಲವ ಬದರಿನಾಥ್.

Dr.D.T.Krishna Murthy. said...

ಅಜ್ಞಾನದ ಅಂಧಕಾರವನ್ನು ದೂರಾಗಿಸುವ ಯಾವುದೇ ಜ್ಞಾನದ ಜ್ಯೋತಿಯನ್ನೂ ಸ್ವಾಗತಿಸೋಣ.ಧನ್ಯವಾದಗಳು.

prabhamani nagaraja said...

`ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕು' ಎನ್ನುವುದೇ ಉತ್ತಮ ವಿಚಾರ. ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತ ಬದರಿಯವರೇ, ನನ್ನ ಬ್ಲಾಗ್ ಗೆ ಭೇಟಿ ಕೊಡಿ.

prashasti said...

ಒಳ್ಳೆಯ ವಿಚಾರ ಬದ್ರಿಗಳೇ .. ಒಬಬ್ ವ್ಯಕ್ತಿಯ ಬಗ್ಗೆ ಸಂಪೂರ್ಣ ಅರಿಯದೇ ಟೀಕೆಗೆ ನಿಲ್ಲಬಾರದೆಂಬ ನಿಮ್ಮ ಮಾತು ಸತ್ಯ. ಎಲ್ಲರಲ್ಲೂ ಒಳಿತು/ಕೆಡುಕಿನ ಮುಖಗಳು ಇದ್ದೇ ಇರುತ್ತವೆ. ನಮಗೆ ಬರೀ ಕೆಟ್ಟದ್ದೇ ಕಾಣುತ್ತಿದೆ ಅಂದರೆ ನಮ್ಮ ದೃಷ್ಟಿಕೋನ ಸರಿಯಿಲ್ಲವೆಂದೇ ಅರ್ಥ. ಎಲ್ಲರೂ ನಮ್ಮ ದೃಷ್ಟಿಕೋನಕ್ಕೆ "ಸರಿ"ಯಾಗೇ ಇರಬೇಕೆಂದು ಬಯಕೆ ಹೇಗೆ "ಸರಿ"? ಒಳ್ಳೆಯ ವಿಚಾರ ಮಂಡಿಸಿದ್ದಕ್ಕೆ ಧನ್ಯವಾದಗಳು :-)

suragange said...

I completly agree with you sir.It is not easy to understand him.

ISHWARA BHAT K said...

ಹೌದು. ಕಾಕಾ ಅವರು ಹೇಳಿದಂತೆ ಬೆಳಕು ಎಲ್ಲಿಂದ ಬಂದರೇನು, ಹೊಳೆಯಬೇಕಾದ್ದು ನಮ್ಮ ಮುಖ ಅಷ್ಟೆ. ಲೇಖನ ಚೆನ್ನಾಗಿದೆ. ಮುಂದುವರೆಸಬೇಕಿತ್ತು. ಅಧ್ಯಯನವಿರಲಿ ಸರ್ :)

ಗುಬ್ಬಚ್ಚಿ ಸತೀಶ್ said...

Yes Sir.

Sharada said...

Very true Sir. I have also read 3,4 books of Osho. Especially the book "Krishna, the man and his philosophy" is my favorite. Osho's thought process is mind blowing!We can appreciate his thoughts and knowledge only when we stop focusing on his life style, cars and other irrelevant things.