Sunday, April 22, 2012

ಶ್ರೀ. ರವಿ ಮೂರ್ನಾಡು ಅವರ ನನ್ನ ಬಗೆಗಿನ ಬ್ಲಾಗ್ ಬರಹ.

http://ravimurnad.blogspot.in/2012/04/blog-post_21.html


http://www.gulfkannadiga.com/news-64622.html



ನಾನು full tight, out of order. ಉಬ್ಬುಬ್ಬಿ ಹೋಗಿದ್ದೇನೆ.

ಪುಟ್ಟ ಮೀನಿನಂತಹ ಈ ಅಙ್ಞಾತ ಕವಿಗೆ ಇದು ಭಾರೀ ಬಹುಮಾನ. ಅಸಲು ನನ್ನ ನೀರೇ ಬಾವಿಯಗಲ, ಚಕ್ಕುಬಂದಿಯೂ ಕೂಗು ದೂರ! ತಿಳಿದದ್ದೇ ಅರೆ ಪಾವು. ನನ್ನ ಕವಿತೆಗಳೋ(!) ಸ್ವಗತಗಳು. ಖಾಸಗಿ ಅಳಲು.

ನನ್ನ ಕವಿತೆಗಳನ್ನು ಇಲ್ಲಿ ವಿಶ್ಲೇಷಿಸಿದ ರೀತಿ ತಕ್ಕುದಾಗಿದೆ. ಒಳ ಹೂರಣವು ನಿಮಗೆ ಸರಿಯಾಗಿಯೇ ಅರ್ಥವಾಗಿದೆ ಸಾರ್.

ಪದ್ಯ ಗರ್ಭಿಸುವಾಗ ಗೊಜಲು ಅಥವ ಕಠಿಣಾರ್ಥ ಅಂತ ಮೊದಲ ಓದಿಗೆ ಅನಿಸಿದರೂ, ಈ ಪದಾರ್ಥವಿಲ್ಲದೆ ಈ ಪಾಕಗಟ್ಟಲಾರದು ಎಂದೆಣಿಸಿ ಬರೆಯುತ್ತೇನೆ. ಸ್ವಲ್ಪ ಸ್ಥೂಲ ಕಾಯದ ಈ ಕವಿಯ ಕಾವ್ಯ ಕಬ್ಬಿಣದ ಕಡಲೆಯಾಗದಂತೆ ಆಶೀರ್ವದಿಸಿ.

ಧನ್ಯೋಸ್ಮಿ, ಸಮಕಾಲೀನ ಕಾವ್ಯೋತ್ತಮ ಶ್ರೀಯುತ ರವಿ ಮೂರ್ನಾಡು ಅವರು ತಮ್ಮ ಅತ್ಯುತ್ತಮ ಬ್ಲಾಗಿನಲ್ಲಿ ನನ್ನ ಪುಟ್ಟ ಈಜನ್ನು ಸರಿಯಾಗಿ ಗ್ರಹಿಸಿ, ತಿದ್ದಿ ಬರೆದದ್ದು ನನಗೆ ಮಾರ್ಗ ಸೂಚಿ ಮತ್ತು ದಿಕ್ಸೂಚಿ. ಅಭಾರಿ ರವಿ ಸಾರ್.
ತಮ್ಮ ಅಂತರಾಷ್ಟ್ರೀಯ ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದ ಶ್ರೀಯುತ ರಾಮಚಂದ್ರ ಅವರಿಗೂ ಗಲ್ಫ ಕನ್ನಡಿಗಕ್ಕೂ ಕೃತಙ್ಞತೆಗಳು.

ಇಷ್ಟು ದೊಡ್ಡ ಅಭ್ಯಂಜನಕ್ಕೆ ನಾನು ಪ್ರಾಪ್ತನಾದದ್ದು ನನ್ನ ಪ್ರಯತ್ನಕ್ಕೆ ಸಂದ ಅತ್ಯುನ್ನತ ಪುರಸ್ಕಾರ.

3 comments:

sunil Rao said...

ರವಿ ಅವರೇ...
ಮೊದಲು ನೀವೊಬ್ಬ ಸೂಕ್ಷಮಗ್ರಾಹಿ ಅನ್ನಬಹುದು...ಬದರಿನಾಥ್ ಅವರ ಪಧ್ಯಗಳ ಆಳಕ್ಕೆ...ಕವಿಯ ಭಾವಕ್ಕೆ ಇಳಿದು ಬರೆದಿದ್ದೀರ ಅನ್ಸತ್ತೆ...ಅಥವಾ ಅದು ನಿಮ್ಮದೇ ಭಾವದ ಸಮಾಗಮವೂ ಆಗಿರಬಹುದು..
ನಾನು ಕಂಡಂತೆ ಬದರಿನಾಥ್ ಅವರ ಪಧ್ಯಗಳಲ್ಲಿ ಒಂಥರಾ ಆರ್ಥ ಭಾವ ಇರುತ್ತದೆ,ಇನ್ನೊಮೆ ಏನೋ ಜಿಜ್ಞಾಸೆ ಹಾಗು ಆಶಾಭಾವನೆ....ಇವೆಲ್ಲದರ ಮಿಶ್ರಣ ಅವರ ಪಧ್ಯಗಳು...ಓದುಗನಿಗೆ ಎಟುಕಲಾಗದ್ದನ್ನ ಆತ ಯಾವತ್ತೂ ಕೊಟ್ಟಿಲ್ಲ...
ಪದ್ಯಗಳೇ ಅಲ್ಲ...ಅವರ ವ್ಯಕ್ತಿತ್ವ ಅವರ ಕವನಗಳಿಗಿಂತ ಸುಂದರ

ಇಬ್ಬರಿಗೂ ಧನ್ಯವಾದಗಳು.
sunil

ಜಲನಯನ said...

ರವಿಯವರೇ ಹೌದು ವಿಶ್ಲೇಷಣೆ ಮತ್ತು ದುಬಟಿ-ಕಾಮೆಂಟ್ ಎರಡರ ವ್ಯತ್ಯಾಸ ನಿಮ್ಮ ಲೇಖನದಲ್ಲಿ ಕಾಣುತ್ತೆ. ಕೆಲವೊಮ್ಮೆ ಬದರಿಯವರ ಕವಿತೆಯ ಆಳದ ಅರ್ಥವಾಗದೇ ಸ್ವ್ಲಲ್ಪ ಈಜಿ... ಹೊರಬಂದು ಓಹ್..ಚನ್ನಾಗಿದೆ ಎಂದಿದ್ದು ನನ್ನ ದುಬಟಿ-ಕಾಮೆಂಟ್ ಆಗಿದ್ದರೂ ಅದು ನನ್ನ ಅರಿತುಕೊಳ್ಳುವ ಮಿತಿಯನ್ನು ಆಧರಿಸಿತ್ತು ಎಂದರೂ ತಪ್ಪಿಲ್ಲ... ನಿಜ ಅವರ ಕೆಲ ಶಬ್ದಗಳ ಬಳಕೆ... ಬೆಟ್ಟದ ನೆಲ್ಲಿ ತಿಂದಂತೆ...ಆಗ ಏನಿದೆ ಇದ್ರಲ್ಲಿ..?? ಅಥವಾ..ಏಯ್..ಬಿಡು ಎನಿಸಿದರೂ ನಂತರ ಮತ್ತೆ ಮತ್ತೆ ನವಿರು ಸ್ವಾದ ಮನದಾಳಕ್ಕೆ ಹೋಗಿಬರುವುದು ಮಾಡಿದಾಗ ಹೌದು..ನಿಜಕ್ಕೂ ಸುಂದರ ಭಾವನೆಗಳ ಮೋಹಕ ಮಂಥನ ಅನಿಸುತ್ತೆ...
ವಿಶ್ಲೇಷಿಸಿದ ನಿಮಗೂ ಅಂತಹ ಯೋಗ್ಯ ಕವನಗಳನ್ನು ನೀಡುತ್ತಿರುವ ಬದರಿಗೂ ನನ್ನಿ.

Jayalaxmi said...

ತುಂಬಾ ಸೂಕ್ತ ವಿಶ್ಲೇಷಣೆ ರವಿ ಮೂರ್ನಾಡು ಅವರದು. ಬರದಿನಾಥ್ ಅವರ ಕವಿತೆಗಳು ನೇರ ಅವರ ಎದೆಯ ಪೆನ್ನಿಂದ ಹಾಳೆಗಿಳಿವ ಸಹಜತೆ ಮತ್ತು ನೈಜತೆಯಿಂದಾಗಿ ಆಪ್ತವಾಗುವ, ಕೆಲವೊಮ್ಮೆ ಕಾಡುವಂಥವು.