Tuesday, September 4, 2012

ಗುರುಭ್ಯೋ ನಮಃ


ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ಪ್ರೀತಿಯು ನಮ್ಮ ಬಾಳ ಬೆಳಕು.

ಶಾಲೆಯಲಿ ಕಲಿಸಿದ ಗುರುಗಳು ನಮ್ಮ ಬದುಕಲ್ಲಿ ಎನಿತು ಮುಖ್ಯರಾಗುತ್ತಾರೋ ಅಂತೆಯೇ ನಮ್ಮ ಬದುಕಲ್ಲಿ ಪಾಠ ಕಲಿಸಿದವರೂ ನಮಗೆ ಗುರುಗಳ ಸಮಾನರೇ.

ಬದುಕಿನ ಎಷ್ಟೋ ಕಹಿ ಘಟನೆಗಳನ್ನು ಹುಟ್ಟು ಹಾಕುವ ಆಪ್ತರಿಂದ ನಾವು ಪಾಠ ಕಲಿತಿರುತ್ತೇವೆ. ಅಂತಹ ಅನುಭವವು ನಮ್ಮನ್ನು ಹೊಸ ದಿಕ್ಕಿಗೆ ಹೊಸ ಆಲೋಚನೆಗಳಿಗೆ ಮತ್ತಷ್ಟು ಹುಷಾರಾಗಿಯೂ ಉತ್ಸಹಕತೆಯಿಂದಲೂ ಮುನ್ನಡೆಸುತ್ತದೆ. ಇವರೂ ನಮಗೆ ಗುರುಗಳೇ.

ಶಾಲೆ ಕಾಲೇಜುಗಳ ಉಪಾದ್ಯಾಯ ಪ್ರಾಧ್ಯಾಪಕರ ಜೊತೆಗೆ ನಮಗೆ ಹೊರ ಜಗತ್ತಿನಲ್ಲಿ ಕೆಲಸ ಕಲಿಸುವ ನಮ್ಮನ್ನು ತಿದ್ದುವ ಎಲ್ಲರೂ ನಮಗೆ ಗುರು ಸಮಾನರೇ.

ಕ್ಯಾಮರಾ ಹೇಳಿಕೊಟ್ಟವರು, ಗಣಕಯಂತ್ರ ಕಲಿಸಿದವರೂ, ಬ್ಲಾಗ್ ಪರಿಚಯಿಸಿದವರೂ, ನನ್ನ ಕವನಗಳನ್ನು ಮುಲಾಜಿಲ್ಲದೆ ತಿದ್ದಿದವರೂ, ನನ್ನ ವಸ್ತ್ರ ವಿನ್ಯಾಸ ಮಾಡುವ ದರ್ಜಿ ಜೊತೆಗೆ ಅನುಕ್ಷಣ ನಮ್ಮನ್ನು ತಿದ್ದುವುದರಲ್ಲೇ ಮೆತ್ತಗಾಗುವ ನಮ್ಮ ಬಾಳ ಸಂಗಾತಿಗಳೂ ನಮಗೆ ಗುರುಗಳೇ.

"ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು..." 


 

12 comments:

ಮೌನರಾಗ said...

ಸಮಸ್ತರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ಮನಸು said...

ಎಲ್ಲರೂ ಒಂದಲ್ಲಾ ಒಂದು ರೀತಿ ಗುರುಗಳೇ... ಗುರುಭ್ಯೋ ನಮ:

Manjula said...

"ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು..."

ಎಷ್ಟು ಚಂದದ, ಅರ್ಥಪೂರ್ಣ ಸಾಲುಗಳು :-)
"ಅರಿವೇ ಗುರು" :-)

ರವಿ ಮೂರ್ನಾಡು said...

ದಿನಾಚರಣೆ ಅನ್ನೋದನ್ನು ಆಚರಣೆ ಮಾಡುವುದರಲ್ಲೇ ಒಂದು ವಿಶಿಷ್ಟತೆ ಇದೆ. ಏಕೆಂದರೆ ಅಂತಹ ಸ೦ದರ್ಭವನ್ನು ,ಅಂತಹ ವ್ಯಕ್ತಿಗಳನ್ನು ,ಅವರ ಕಾರ್ಯವನ್ನು ಸಮಾಜ ಮರೆತು ಬಿಡುತ್ತದೆ ಅನ್ನುವ ಭಯ ಒಂದು ಕಡೆ.ಇನ್ನೊಂದು ಸಮಾಜ ಹದ ತಪ್ಪಿದೆ ಅನ್ನುವ ಎಚ್ಚರಿಕೆ ಗಂಟೆ ಮತ್ತೊಂದು ಕಡೆ. ಅದಕ್ಕಾಗಿ ದಿನಾಚರಣೆ ನೆಪದಲ್ಲಿ ಆದರೂ ಸಮಾಜವನ್ನು ಜೀವಂತಗೊಳಿಸುವ ಒಂದು ಪ್ರಕ್ರಿಯೆ ನಾವು ಆಚರಿಸುವ ವಿಶ್ವದ ಎಲ್ಲಾ ದಿನಾಚರಣೆಗಳಲ್ಲಿ ಅಡಗಿದೆ. ಒಂದು ಉತ್ತಮ ಕವಿತೆ ಕಟ್ಟಿ ಕೊಟ್ಟಿದ್ದೀರಿ.

Sudeepa ಸುದೀಪ said...

ನಿಜವಾದ ಮಾತು...ಬದರಿ ಸರ್...ಶಾಲೆಯ ಶಿಕ್ಷಣವಷ್ಟೆ ವಿದ್ಯೆಯಲ್ಲ...ಅದಕ್ಕಿಂತ ಮಿಗಿಲು...ಹೊರಜಗತ್ತು ನಿತ್ಯ ಜೀವನದಲ್ಲಿ ನಮಗೆ ಪ್ರತಿಕ್ಷಣವು ಪಾಠ ಕಲಿಸುತ್ತಿರುತ್ತದೆ...

Srikanth Manjunath said...

ಚಂದನದ ಲೇಖನ ಬದರಿ ಸರ್...
ಸೌರ ಮಂಡಲದಲ್ಲಿ ದೊಡ್ಡ ಗ್ರಹ ಗುರು..
ಭೂಮಂಡಲದಲ್ಲಿ ದೊಡ್ಡ ಸ್ಥಾನ ಗುರು
ಮಾತಾ ಪಿತ್ರುಗಳೇ ಮೊದಲ ಗುರು
ಶ್ಲೋಕದಲ್ಲಿ ಮೂರನೇ ಮಜಲು ಗುರು
ನಮಗೆ ಅರಿವನ್ನು ಕೊಡುವವರು ಗುರು
ವಾರದಲ್ಲಿ ಮಧ್ಯದ ವಾರ ಗುರು
ದಾಸರು ಹೇಳಿದ ವಾಣಿ..."ಗುರು"ವಿನ ಗುಲಾಮನಾಗದೆ ದೊರೆಯುವುದೇ ಮುಕ್ತಿ..."
ಗುರುಭ್ಯೋ ನಮಃ,,,ಗುರುವೇ ನಮಃ..
ನಿಮ್ಮ ಲೇಖನಕ್ಕೆ ಅನಂತಾನಂತ ಅಭಿನಂದನೆಗಳು...

prashasti said...

ಶಿಕ್ಷಕರ ದಿನಕ್ಕೆ ಒಳ್ಳೆಯ ಪೋಸ್ಟ್..
ತಡವಾಗಿ ನೋಡಿದೆ ಕ್ಷಮಿಸಿ..
ವಿದ್ಯೆ ಕಲಿಸಿದವನಿಂದ, ಕವನ ತಿದ್ದಿದವನವರೆಗೆ ಗುರು ಅನ್ನುವವನು ಎಲ್ಲೆಡೆ ಹೇಗೆ ಸರ್ವವ್ಯಾಪಿ ಎಂದು ಚೆನ್ನಾಗಿ ಬರೆದಿದ್ದೀರ.
ಕಾವ್ಯದ ದೃಷ್ಟಿಯಿಂದ ನೀವೂ ಗುರು ನನಗೆ :-) ಹಾಗಾಗಿ ನಿಮಗೂ ಶುಭಾಶಯಗಳು ಎಂದರೆ ತಪ್ಪಾಗಲಾರದೇನೋ :-)

savitri said...

ಸರ್, ಗುರುಗಳ ಬಗೆಗಿನ ತಮ್ಮ ಅಭಿಪ್ರಾಯ ಓದಿ ಖುಷಿಯಾಯಿತು. ಮತ್ತೆ ಸಮಯ ಸಿಕ್ಕಾಗ ನಿಮ್ಮ ಭ್ಲಾಗ್ ಗೆ ಬಂದು ಓದಿಕೊಂಡು ತಿಳಿದುಕೊಳ್ಳುವೆ. ನಿಮ್ಮ ಲೇಖನಿಯಿಂದ ಹೊಸ ಹೊಸ ಬರಹಗಳು ಹೊರಬರಲಿ ಅಂತ ಆಶಿಸುತ್ತೇನೆ.

ಪದ್ಮಾ ಭಟ್ said...

ಎಷ್ಟು ಚನ್ನಾಗಿ ಬರೀತೀರಾ...ತುಂಬಾ ಲೈಕ್ ಮಾಡಿದೆ ನೋಡಿ...ದಾರಿ ತೋರುವ ಎಲ್ಲರೂ ಗುರುಗಳೇ :)

ಪದ್ಮಾ ಭಟ್ said...
This comment has been removed by the author.
KalavathiMadhusudan said...

badarinath sir bahala arthapoornavada lekhana,nityavu arivina guruvinondige neravina guruvina jote saguvude jivana.dhanyavadgalu.

KalavathiMadhusudan said...

sir vishaalavaada arthavulla putta aaru saalugalu sogsaagide.dhanyavaadagalu.