Saturday, October 1, 2011

ರೀತಿ... (ಭಾಗ ೫)

ಈ ಕಥೆ ಹೊಕ್ಕುವ ಮುನ್ನ ಈ ನಾಲ್ಕೂ ಕಥೆ ಓದಿ
ಆಮೇಲೆ ಈ ೫ನೇ ಭಾಗವನ್ನು ಕೈಗೆತ್ತಿಕೊಳ್ಳೀ....

ಮೊದಲು ಪ್ರಕಾಶಣ್ಣ ಬರೆದ ಕಥೆ ರೀತಿ..........
http://ittigecement.blogspot.com/2011/09/blog-post.html
 
ನಂತರ ದಿನಕರಣ್ಣ ಬರೆದ ಕಥೆ ಈ ರೀತಿ........
http://dinakarmoger.blogspot.com/2011/09/blog-post.html
 
ಆಮೇಲೆ ಪ್ರವೀಣ್ ಬರೆದ ಕಥೆ ಇದೇ ರೀತಿ.......
http://pravi-manadaaladinda.blogspot.com/2011/09/blog-post_27.html
 
ನಮ್ಮೊಳಗೊಬ್ಬ ಬಾಲು ಸರ್ ಸರದಿ!
ಅವರು ಬರೆದ ಕಥೆ ರೀತಿ!! ಈ ರೀತಿ !!! ಇನ್ನೊಂದು ರೀತಿ !!!!
http://nimmolagobba.blogspot.com/2011/09/blog-post_30.html 
 
 
 
 
ಈಗ ನನ್ನ ಸರದಿ...

ರೀತಿ.... (ಭಾಗ ೫)

ಆ ನಾಲ್ವರು ಇಷ್ಟು ಗಾಬರಿಯಿಂದ ನನ್ನತ್ತ 
ಯಾಕೆ ಬರುತ್ತಿದ್ದಾರೆ? ಈತ ಯಾರು ಡಾಕ್ಟರ್? 
ಇವರಿಗೇನು ಹೋಟೆಲಿನಲ್ಲಿ ಕೆಲಸ... 
ಅರೇ ಇದ್ಯಾವ ಹೊಸ ಜಾಗ, ಇವೆಲ್ಲ ಯಾರು... 
ಬರೀ ಡೆಟಾಲ್ ಗಮಲು?

ಮತ್ತೆ ಜಯಂತನ ಹಾಗೂ ರಾಗಿಣಿಯ ಮೊಬೈಲುಗಳು 
ಒಂದೇ ಸಮನೆ ಯಾಕೆ ಬಡೆದುಕೊಳ್ಳುತ್ತಿವೆ?

ನಾನು ಗಾಳಿಯಲ್ಲಿ ತೇಲುತ್ತಿದ್ದಂತಿದೆ, ಕೆಳಗೆ 
ನೋಡಿದೆ. ಎಲ್ಲೋ ನೋಡಿದ ಮುಖ ಅನಿಸಿತು, 
ಮತ್ತೆ ನೋಡಿದೆ ಅಲ್ಲಿ ಹಾಸಿಗೆಯಲ್ಲಿ ನಾನೇ 
ಮಲಗಿದ್ದೇನೆ ಎನಿಸಿತು!

ಅವಳಿಗೆ ಈಗ ಸಣ್ಣದಾಗಿ ಅನುಮಾನ ಬರತೊಡಗಿತು, 
ಸ್ವಲ್ಪ ಸ್ವಲ್ಪ ನೆನಪಾದವು. 
ಹೋಟೆಲಿನಲ್ಲಿ ಕಣ್ಣು ಮಂಜಾಗತೊಡಗಿದ್ದು, 
ಹಿಂದೆ ವಾಲಿದವಳು ಛೇರಿನ ಸಮೇತ ಹಿಂದೆ 
ಬಿದ್ದು ಬಿಟ್ಟಿದ್ದೂ!....

ಛೇ... ಎಂತ ತಪ್ಪು ಮಾಡಿದೆ ಅನಿಸಿಬಿಟ್ಟಿತು.
 
ಸಮಯ ಮೀರಿ ಹೋದ ಮೇಲೆ ನಾನು ಅಲವತ್ತುಕೊಂಡರೆ ಏನು 
ಉಪಯೋಗ? ಹೋಟೆಲ್ ತಲುಪುವಾಗಲೇ 
ನನ್ನ ಹೊಟ್ಟೆ ತುಂಬಾ ತೊಳಸುತ್ತಿತ್ತು. ಕಣ್ಣು ಭಾರಗೊಂಡು 
ಮುಚ್ಚುತ್ತಿತ್ತು. 
ತಲೆ ಸುತ್ತಿ ಬಂದು ಬೀಳುವವಳಿದ್ದೆ. 

"ಪುಟ್ಟಣ್ಣಿ... ಪುಟ್ಟಣ್ಣಿ, ಏನಾಯ್ತು" ಅಂತ 
ಅವರು ನನ್ನ ಕೈ ಹಿಡಿದು ಕೇಳಿದರು :

"ಪಿತ್ಥ" ಎಂದಷ್ಟೇ ಉತ್ತರಿಸಿ ಅವನ ಕೂಡ ನಡೆದೆ. 

ಹೊಟಲ್ ತಲುಪಿದ ಮೇಲೂ ಮನಸು ಅಸ್ವಸ್ಥವಾಗಿತ್ತು.
ಯಾವ ಹೊತ್ತಿನಲ್ಲಿ ಎಲ್ಲಿಂದ ಬಾಂಬ್ ಸಿಡಿಯುವುದೋ 
ಎನ್ನುವ ಭೀತಿಯ ಗಡಿನಾಡ ಹಳ್ಳಿಗನ ಅಮಾಯಕ ಸ್ಥಿತಿಯಂತಿತ್ತು. 
ಅಲ್ಲಿ ಜಯಂತ, ರಾಗಿಣಿ ಪರಿಚಯಗಳಾದ 
ಮೇಲೆ, ಕಥೆ ಸುಖಾಃಂತ್ಯವೂ ಆದ ಮೇಲೆ... 

ಛೇ!.... ನಾನು ದುಡುಕಿ ತಪ್ಪು ಮಾಡಿಬಿಟ್ಟೆ ಅನಿಸಿತು.

ಒಮ್ಮೆಲೆ ಭೂಮಿಯೇ ತಲೆ ಮೇಲೆ ಬಿದ್ದಂತಾಗಿ 
ಛೇರಿನಿಂದ ಹಿಂದೆ ಬಿದ್ದು ಬಿಟ್ಟೆ.
 
ಹೋಟೆಲ್ ಶಾಂತ ವಾತಾವರಣ ಅಲ್ಲೋಲ 
ಕಲ್ಲೋಲವಾಗಿ ಹೋಯ್ತು. ಜಯಂತ್, 
ನನ್ನವರು ಮತ್ತು ರಾಗಿಣಿ ದಿಗ್ ಭ್ರಾಂತರಾಗಿ, 
ಆ ಕ್ಷಣ ಏನು ಮಾಡಲೂ ತೋಚದೆ
ಪರದಾಡಿದರೂ ಅನಿಸುತ್ತದೆ. 
ನನ್ನವರು ರಾಗಿಣಿ ನನ್ನನ್ನು ಮೇಲೆತ್ತಿ 
ಮತ್ತೆ ಛೇರಿನಲ್ಲಿ ಕೂಡಿಸಿದರು.

ಮುಖಕ್ಕೆ ನೀರು ಸಿಂಪಡಿಸಿ "ಚಿನ್ನಾ...ಚಿನ್ನಾ" 
ಅಂತ ಭಯಾತಂಕದಿಂದ ಎಚ್ಚರಿಸಲು 
ನೋಡುತ್ತಿದ್ದರು....

ಆಗಲೇ ನನ್ನ ಬಾಯಿಂದ ನೊರೆ ನೊರೆ....
ಬರಲಾರಂಭಿಸಿತ್ತು.

ಜಯಂತ್ ಆಂಬುಲೆನ್ಸಿಗೆ ಕಾಲ್ ಮಾಡಿದ್ದ ಅಂತ 
ಕಾಣುತ್ತದೆ. ನನ್ನನ್ನು ಸ್ಟ್ರೆಚ್ಚರ್ ಮೇಲೆ 
ತೆಗೆದುಕೊಂಡು ಆಸ್ಪತ್ರೆಗೆ ದೌಡಾಯಿಸಿದರು.

ಹೋಟೆಲ್ಲಿಗೆ ನನ್ನವರನ್ನು ಕರೆದೊಯ್ಯ ಬೇಕು 
ಅಂತ ನಿರ್ಧರಿಸಿದ ಕೂಡಲೇ ನಾನು 
ಮನೆ ಹಿತ್ತಲಲ್ಲಿದ್ದ ಗಿಡಗಳಿಗೆ 
ಸಿಂಪಡಿಸುವ ಕ್ರಿಮಿನಾಶಕವನ್ನು 
ಎತ್ತಿಟ್ಟುಕೊಂಡಿದ್ದೆ.....

ನನ್ನವರು ಫ್ರೆಷ್ ಅಪ್ ಆಗಲು ಬಾತ್ ರೂಂಗೆ ಹೋದ 
ಕೂಡಲೇ ಅಷ್ಟೂ ದ್ರವವನ್ನು ಗಟಗಟನೆ ಕುಡಿದು 
ಮುಗಿಸಿದ್ದೆ. ನನ್ನ ಅತಿರೇಕ, ನನ್ನನ್ನೇ ಸದೆ 
ಬಡಿಯಲಿದೆ, ಅಂತ ಅರಿವಿದ್ದರೂ, ಅಲ್ಲಿಗೆ ಗೆದ್ದದ್ದು
ನನ್ನ ಹಟಮಾರಿತನವೇ!

ಅಕಸ್ಮಾತ್ ಜಯಂತ ಆವತ್ತು ನಮ್ಮ ಕಾಲೇಜ್ 
ಪ್ರವಾಸದಲ್ಲಿ ಇವಳೇ ನನ್ನನ್ನು ಕೈಹಿಡಿದು ಕರೆದಳು, 
ಅಷ್ಟರಲ್ಲಿ ಗೆಳತಿ ಬಾತ್ ರೂಂನಿಂದ ಬಂದಳು 
ಅಂತ ಸಾಧಿಸಿದರೇ.... ನನ್ನ ಗತಿ!

ಮತ್ತೆ ಜಯಂತ್ ಮತ್ತು ರಾಗಿಣಿಯ ಮೊಬೈಲ್ 
ಒಂದೇ ಸಮನೆ ಹೊಡೆದುಕೊಳ್ಳಲು ಶುರುವಾಯ್ತು, 
ಇನ್ನೂ ಶಾಕಿನಲ್ಲೇ ಇದ್ದ ಜಯಂತ ಆಸ್ಪತ್ರೆ 
ಪಡಸಾಲೆಯಲ್ಲಿ ತಲೆ ಮೇಲೆ ಕೈಹೊತ್ತ ನನ್ನವರ 
ಪಕ್ಕ ಕುಳಿತಿದ್ದ. ರಾಗಿಣಿ ಫೋನ್ ಎತ್ತಿದಳು. 
ಅತ್ತಲಿಂದ "ಏನ್... ಚಿನ್ನಾ" ಎನ್ನುವ ದನಿ ಕೇಳಿಸಿತು. 
ರಾಗಿಣಿಗೆ ಏನು ಮಾದಲೂ ತೋಚಲಿಲ್ಲ.

ಅರೇ.. ನನಗ್ಯಾರು ಇಲ್ಲಿ ಹೀಗೆ ಕಾಲ್ ಮಾಡ್ತಾರೆ 
ಅನ್ನುವ ಆಶ್ಚರ್ಯ ಅವಳಿಗಾಯ್ತು.

"ನಿನ್ನ ಕಥೆ ನಿನ್ನ ಗಂಡನಿಗೆ ಗೊತ್ತಾ?" ಕಾಲ್ ಕಟ್ಟಾಯಿತು.

ಪಾಪ, ರಾಗಿಣಿಗೆ ಹೇಳೋಣವೆಂದರೇ ನಾನೇ 
ಮೈಮೇಲೆ ಎಚ್ಚರವಿಲ್ಲದೆ, ಕುಡಿದ ಅಷ್ಟೂ ವಿಷ ಕಕ್ಕಿಸಲು 
ಡಾಕ್ಟರುಗಳು ಬಾಯಿಯಲ್ಲಿ ತುರುಕಿದ ಪೈಪ್ 
ಸಮೇತ ಬಿದ್ದುಕೊಂಡಿದ್ದೆ.

ಅವನು ಪ್ರತಾಪ ನನ್ನ ಪಕ್ಕದ ಮನೆ ಹುಡುಗ 
ರಾಗಿಣಿ ಮತ್ತು ಜಯಂತನಿಯ ನಂಬರ್ ನಾನೇ ಕೊಟ್ಟು 
ಹೀಗೆ ಪದೇ ಪದೇ ಕಾಲ್ ಮಾಡಿ ಹಿಂಸೆಕೊಡಲು 
ನಾನೇ ಹೇಳಿದ್ದೆ. ಆದರೆ, 

ಹೋಟೆಲಿನ ಘಟನೆ ಸುಖಾಂತ್ಯವಾದ ಮೇಲೆ, 
ನಾನು ಪ್ರಯತ್ನಿಸಿದ್ದೇ ಪ್ರತಾಪನ ಮೊಬೈಲಿಗೆ, 
ಅಷ್ಟರಲ್ಲಿ ನಾನೇ ಬಿದ್ದು ಬಿಟ್ಟಿದ್ದೆ.

ಜಯಂತ ಪದೇ ಪದೇ ಬರುವ ಕಾಲುಗಳಿಂದ ರೋಸಿ 
ಹೋಗಿ ಕಡೆಗೆ ಕಾಲ್ ತೆಗೆದುಕೊಂಡ, 
ಅತ್ತಲಿಂದ ವಿಕಟ ನಗೆ 
"ಯಾಕ್, ಬಾಸ್! ಹಳೇ ಸ್ಟೋರಿ ಕೆದಕೋಕ್ಕೆ 
ಹೋಗ್ತೀಯಾ?" 
ಅರ್ಥವಾಗದೇ ಜಯಂತ್ ಕಾಲ್ ಕಟ್ ಮಾಡಿದ.

ಡಾಕ್ಟರ್ ವರೆಂಡಾಕ್ಕೆ ಬಂದು ನನ್ನವರಿಗೆ 
ಏನೋ ಹೇಳಿದಂತಿದೆ. ಈಗ ಆ ನಾಲ್ವರೂ 
ನನ್ನ ಬಳಿ ಬರಲಾರಂಬಿಸಿದರು. ನರ್ಸ್ ನನ್ನ 
ಬಾಯಿಗೆ ಹಾಕಿದ್ದ ಪೈಪ್ ತೆಗೆದು, ಪಕ್ಕದಲ್ಲಿ ನಿಂತಳು.

"ಸಾರಿ, ಎಷ್ಟೋ ಟ್ರೈ ಮಾಡಿದ್ವಿ, ಅವರು ವಿಷ 
ಸೇವಿಸಿ ತುಂಬಾ ಹೊತ್ತಾಗಿತ್ತು... ಅನಿಸುತ್ತೆ" 
ಅಂತ ಹೇಳೀದೊಡನೆ 
ಮೂರು ಜನ ನನ್ನ ದೇಹವನ್ನು ಮುಟ್ಟಿ ಮುಟ್ಟಿ 
ಜೋರಾಗಿ ಅಳಲಾರಂಭಿಸಿದರು.

....

ಅಸಲು, ನನ್ನ ಮಾನಸಿಕ ಆರೋಗ್ಯವೇ 
ಸರಿಯಿಲ್ಲ ಎನಿಸಿತು. ಪರಿಸ್ಥಿತಿಯನ್ನು ನಾನು 
ನೋಡಿದ ರೀತಿಯೇ ಸರಿಯಿಲ್ಲ ಅನಿಸಿತು.

ಮೊದಲು ನನ್ನವರ ಮೊಬೈಲಿಗೆ ಬಂದ ಮೆಸೇಜ್ 
ನನ್ನಲ್ಲಿ ಉಂಟು ಮಾಡಿದ್ದ ಕಂಪನವನ್ನು 
ನಾನು ಶಾಂತ ಚಿತ್ತದಿಂದ ನೋಡಬಹುದಿತ್ತು! 
ನಿಮ್ಮ In Box, Out Box, miss calls,
out going ಮತ್ತು in coming calls
ಯಾಕೆ ಡಿಲೀಟ್ ಆಗಿರ್ತವೆ 
ಅಂತ ನೇರವಾಗಿ ಕೇಳ ಬಹುದಿತ್ತು! 
ನಾನೂ ಕೇಳಲಿಲ್ಲ...

ಇಷ್ಟು ಪ್ರೀತಿಸೋ ಗಂಡ, ಅವನ ಗೆಳತಿ ಮತ್ತು ಜಯಂತ, 
ಒಳ್ಳೆಯ ಮನೆ, ನೆಮ್ಮದಿಯ ಸಂಸಾರ..... 
ಏನಿತ್ತು ಏನಿರಲಿಲ್ಲ ಆದರೂ ನಾನು ಏನೇನೋ 
ಕಲ್ಪಿಸಿಕೊಂಡು ಸುಮ್ಮನೆ ಹಾಳು ಮಾಡಿಕೊಂಡೇ 
ನೋಡಿದರೇ ......

ಈಗ ನಾನೇ ಶವವಾಗಿ ಮಲಗಿದ್ದೇನೆ!

ಥಟ್ ಅಂತ ಎಚ್ಚರವಾಯಿತು. ಹೊರ ಬಾಗಿಲ ಕಾಲಿಂಗ್ 
ಬೆಲ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. 
ಸಂಜೆ ಹೋಟೆಲಿಗೆ ಕರೆದೋಯ್ಯಲು ನನ್ನವರು 
ಬಂದಿರಬಹುದು ಅನಿಸಿತು, ಅರೇ ಇನ್ನೂ ನಾನು 
ಮನೆಯಲ್ಲೇ ಇದ್ದೇನೆ, ಸತ್ತಿಲ್ಲ ಕನಸ್ಸಿನಲ್ಲಿದ್ದೆ..... 
ಮೈ ಪೂರ ಬೆವತು ಹೋಗಿತ್ತು....

ಇನ್ನೂ ನಾವು ಹೋಟೆಲ್ಲಿಗೆ ಹೋಗಿಲ್ಲ, 
ಅಲ್ಲಿ ಇನ್ನೇನು ಕಾದಿದೆಯೋ... ಅಂತ ಭಯವಾಯ್ತು...

ಎದ್ದು ಅಲ್ಲೇ ಇದ್ದ ಟ್ವೆಲಿನಲ್ಲಿ ಮುಖ ಒರೆಸಿಕೊಂಡೆ, 
ಕನ್ನಡಿಯಲ್ಲಿ ಚದುರಿದ ತಲೆ ತೀಡಿಕೊಂಡೆ.  

ಬಾಗಿಲು ತೆಗೆದೆ, ಒಮ್ಮೆ ತಲೆ ಸುತ್ತಿ ಬಂದಂತಾಯ್ತು... 
ಯಾರೋ ನಾಲ್ಕು ಜನ ಅಲ್ಲಿ ನಿಂತಿದ್ದರು. 
ಅದರಲ್ಲಿ ಇಬ್ಬರು  ಪುಟ್ಟಣ್ಣಿಯನ್ನು ಆ ಕಡೆ ಈ ಕಡೆ 
ಹಿಡಿದು ನಿಂತಿದ್ದರು.  ನನ್ನ ಯಜಮಾನರ ಬಾಯಲ್ಲಿ, 

ನೊರೆ.... ನೊರೆ...
 

16 comments:

Ittigecement said...

ಬದರಿನಾಥ ಸರ್ ಜಿ...

ಅಬ್ಭಾ !!

ಒಂದು ಕಥೆಯನ್ನು ಯಾವರೀತಿ ಹೇಗೆಲ್ಲಾ ಬೆಳೆಸಬಹುದು !!

ಬ್ಲಾಗಿಗರ ಈ ರೀತಿ ತುಂಬಾ ತುಂಬಾ ಖುಷಿಕೊಡುವಂಥಾದ್ದು.... !!

ನಿಮ್ಮ ಪ್ರಯತ್ನವನ್ನು ಮನಸಾರೆ ಅಭಿನಂದಿಸುತ್ತೇನೆ...

ಮುಂದೆ ??

ಖೊ ಖ್ಕೋ !!!

ಮನಸು said...

ಓಹ್..!! ಕಥೆಯ ತಿರುವು ಚೆನ್ನಾಗಿದೆ...

balasubramanya said...
This comment has been removed by the author.
balasubramanya said...

ಬದರೀನಾಥ್ ಸರ್ ಕತೆಯ ಮುಂದುವರಿಕೆ ಚೆನ್ನಾಗಿದೆ. ಒಳ್ಳೆಯ ತಿರುವು ಬಂದಿದೆ ನೋಡೋಣ ಮುಂದೆ ಯಾರು ಮುಂದುವರೆಸುತ್ತಾರೆ ಎಂದು, ನಿಮ್ಮ ಬರವಣಿಗೆಗೆ ಧನ್ಯವಾದಗಳು.

Dr.D.T.Krishna Murthy. said...

ಬದರಿ;ಒಳ್ಳೇ ರೀತಿಯಲ್ಲಿ ಕತೆ ಮುಂದುವರಿಸಿದ್ದೀರಿ.ಕತೆ ಮುಂದೇನಾಗುವುದೋ ಕಾದು ನೋಡಬೇಕು.

ಈಶ್ವರ said...

ವಿಶೇಷವಾಗಿದೆ. ನಿಜವಾಗಿಯೂ ಒಳ್ಳೆ ಪ್ರಯತ್ನ. ಎಲ್ಲರೂ ಸುಂದರವಾಗಿ ಬರೆದಿದ್ದಾರೆ.. ಮುಂದೇನಾಗುತ್ತದೆ ?

Gangadhar Divatar said...

ಬದರೀನಾಥ್ ಸರ್..

ಮದುವೆ ಮುನ್ನುಡಿಯೊಂದಿಗೆ ಪ್ರಕಾಶ್ ಅವರ ಕಥೆ ಆರಂಭವಾಗಿ ಮೊದಲ ರಾತ್ರಿಯಲ್ಲಿಯೇ ಗಂಡನ ಸಂಶಯಾಸ್ಪದ ನಡುವಳಿಕೆ ಮನದಲ್ಲಿ ತಳಮಳ ಮೂಡಿಸುವಲ್ಲಿಗೆ ಅಂತ್ಯವಾಗುತ್ತದೆ.
ಶ್ರೀಯುತ ದಿನಕರ ಮೊಗೇರ್ ಅವರು ದಂಪತಿಗಳು ತಮ್ಮ ಭೂತಕಾಲವನ್ನು ಮರೆತು ಹೊಂದಾಣಿಕೆಯತ್ತ ಹೆಜ್ಜೆ ಹಾಕುವ ಅನಿವಾರ್ಯತೆಯನ್ನು ಕಥಾನಾಯಕಿಯ ಕಹಿಘಟನೆಯನ್ನು ಚಿತ್ರಿಸಿ ಗಂಡನ ಮೇಲೆ ಇರುವ ಅನುಮಾನದ ಎಳೆಯನ್ನು ಕರಗಿಸುವಷ್ಟರಲ್ಲಿಯೇ ONE MESSAGE RECEIVED ಎಂಬ ಗಂಡನ ದೂರವಾಣಿಯಲ್ಲಿ ಸಂದೇಶ ಮೊಳಗಿಸಿ ಕಥೆಗೆ ಅನಿರೀಕ್ಷಿತ ತಿರುವು ಕೊಡುತ್ತಾರೆ.
ಈ ಹಂತದಲ್ಲಿ ಮೊದಲ ಕಥೆಗೆ ಎರಡು ಕವಲುಗಳು ಮೂಡುತ್ತವೆ...

ಮೊದಲನೆಯದಾಗಿ
ಶ್ರೀಯುತ ಪ್ರವೀಣ್ ತೀರ್ಥಹಳ್ಳಿಯವರು ದಂಪತಿಗಳು ಪರಸ್ಪರ ನಂಬಿಕೆ, ವಿಶ್ವಾಸ ಬೆಳಯುವ ಸಂದರ್ಭದಲ್ಲಿ ಆತುರದ ತೀರ್ಮಾನಗಳು ಅಪಾಯಕ್ಕೆ ಎಡೆಮಾಡಿಕೊಡುತ್ತವೆ ಎಂಬ ಸಂದೇಶವನ್ನು ಕಥಾನಾಯಕಿಯ ಅಮ್ಮನಿಂದ ಬೋಧಿಸುತ್ತಾ ಪ್ರೀತಿಯಿಂದ ಗಂಡನನ್ನು ಗೆಲ್ಲಲು ತಿಳಿಹೇಳುತ್ತಾರೆ.

ನಂತರ ನಿಮ್ಮೊಳಗೊಬ್ಬ ಬಾಲು ಅವರು ದಿನಕರ ಅವರ ಕಥೆಯನ್ನೇ ಮುಂದುವರೆಸಿ ಕಥಾನಾಯಕನ ಸಹಪಾಠಿ ಮತ್ತು ನಾಯಕಿಯ ಸಹಪಾಠಿಗಳನ್ನು ಜೊತೆಗೂಡಿಸಿ ಕಥೆ ಇನ್ನೇನು ಸುಖಾಂತ್ಯವಾಗಬೇಕು ಎನ್ನುವಷ್ಟರಲ್ಲಿ ಪುನಃ ಮೋಬೈಲ್ ರಿಂಗಣಿಸುವುದರ ಮೂಲಕ ಕಥೆಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಾರೆ...

ಅಂತಿಮವಾಗಿ ಈಗ ಓದುತ್ತಿರುವ ನಿಮ್ಮ ಕಥೆಯು ಬಾಲು ಅವರ ಕಥೆಯನ್ನೇ ಮುಂದುವರೆಸಿಕೊಂಡು ಹೋಗುತ್ತಾ ಕಥಾನಾಯಕಿಯ ಕೆಟ್ಟ ಕನಸಿನ ದರ್ಶನ ಮಾಡಿಸಿ suspence ಕಾಯ್ದುಕೊಂಡು, ವಾಸ್ತವಕ್ಕೆ ಮರಳುವ ಹಂತದಲ್ಲಿಯೇ ಮನೆಬಾಗಿಲಿಗೆ ಬಂದಿರುವ ನಾಯಕನ ಬಾಯಲ್ಲಿ ನೊರೆ ಹರಿಸುತ್ತಾ ಅನಿರೀಕ್ಷಿತ ತಿರುವು ಅಂತ್ಯವಾಗುತ್ತದೆ...

ಒಂದೇ ಕಥೆಯನ್ನು ಅವರವರ ಭಾವಕ್ಕೆ ತಕ್ಕಂತೆ ಬೆಳೆಸಿಕೊಂಡು ಹೋಗುವ ನಿಮ್ಮ ವಿನೂತನ ಪ್ರಯೋಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು

Gangadhar Divatar said...

ಬದರೀನಾಥ್ ಸರ್..

ಮದುವೆ ಮುನ್ನುಡಿಯೊಂದಿಗೆ ಪ್ರಕಾಶ್ ಅವರ ಕಥೆ ಆರಂಭವಾಗಿ ಮೊದಲ ರಾತ್ರಿಯಲ್ಲಿಯೇ ಗಂಡನ ಸಂಶಯಾಸ್ಪದ ನಡುವಳಿಕೆ ಮನದಲ್ಲಿ ತಳಮಳ ಮೂಡಿಸುವಲ್ಲಿಗೆ ಅಂತ್ಯವಾಗುತ್ತದೆ.
ಶ್ರೀಯುತ ದಿನಕರ ಮೊಗೇರ್ ಅವರು ದಂಪತಿಗಳು ತಮ್ಮ ಭೂತಕಾಲವನ್ನು ಮರೆತು ಹೊಂದಾಣಿಕೆಯತ್ತ ಹೆಜ್ಜೆ ಹಾಕುವ ಅನಿವಾರ್ಯತೆಯನ್ನು ಕಥಾನಾಯಕಿಯ ಕಹಿಘಟನೆಯನ್ನು ಚಿತ್ರಿಸಿ ಗಂಡನ ಮೇಲೆ ಇರುವ ಅನುಮಾನದ ಎಳೆಯನ್ನು ಕರಗಿಸುವಷ್ಟರಲ್ಲಿಯೇ ONE MESSAGE RECEIVED ಎಂಬ ಗಂಡನ ದೂರವಾಣಿಯಲ್ಲಿ ಸಂದೇಶ ಮೊಳಗಿಸಿ ಕಥೆಗೆ ಅನಿರೀಕ್ಷಿತ ತಿರುವು ಕೊಡುತ್ತಾರೆ.
ಈ ಹಂತದಲ್ಲಿ ಮೊದಲ ಕಥೆಗೆ ಎರಡು ಕವಲುಗಳು ಮೂಡುತ್ತವೆ...

ಮೊದಲನೆಯದಾಗಿ
ಶ್ರೀಯುತ ಪ್ರವೀಣ್ ತೀರ್ಥಹಳ್ಳಿಯವರು ದಂಪತಿಗಳು ಪರಸ್ಪರ ನಂಬಿಕೆ, ವಿಶ್ವಾಸ ಬೆಳಯುವ ಸಂದರ್ಭದಲ್ಲಿ ಆತುರದ ತೀರ್ಮಾನಗಳು ಅಪಾಯಕ್ಕೆ ಎಡೆಮಾಡಿಕೊಡುತ್ತವೆ ಎಂಬ ಸಂದೇಶವನ್ನು ಕಥಾನಾಯಕಿಯ ಅಮ್ಮನಿಂದ ಬೋಧಿಸುತ್ತಾ ಪ್ರೀತಿಯಿಂದ ಗಂಡನನ್ನು ಗೆಲ್ಲಲು ತಿಳಿಹೇಳುತ್ತಾರೆ.

ನಂತರ ನಿಮ್ಮೊಳಗೊಬ್ಬ ಬಾಲು ಅವರು ದಿನಕರ ಅವರ ಕಥೆಯನ್ನೇ ಮುಂದುವರೆಸಿ ಕಥಾನಾಯಕನ ಸಹಪಾಠಿ ಮತ್ತು ನಾಯಕಿಯ ಸಹಪಾಠಿಗಳನ್ನು ಜೊತೆಗೂಡಿಸಿ ಕಥೆ ಇನ್ನೇನು ಸುಖಾಂತ್ಯವಾಗಬೇಕು ಎನ್ನುವಷ್ಟರಲ್ಲಿ ಪುನಃ ಮೋಬೈಲ್ ರಿಂಗಣಿಸುವುದರ ಮೂಲಕ ಕಥೆಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಾರೆ...

ಅಂತಿಮವಾಗಿ ಈಗ ಓದುತ್ತಿರುವ ನಿಮ್ಮ ಕಥೆಯು ಬಾಲು ಅವರ ಕಥೆಯನ್ನೇ ಮುಂದುವರೆಸಿಕೊಂಡು ಹೋಗುತ್ತಾ ಕಥಾನಾಯಕಿಯ ಕೆಟ್ಟ ಕನಸಿನ ದರ್ಶನ ಮಾಡಿಸಿ suspence ಕಾಯ್ದುಕೊಂಡು, ವಾಸ್ತವಕ್ಕೆ ಮರಳುವ ಹಂತದಲ್ಲಿಯೇ ಮನೆಬಾಗಿಲಿಗೆ ಬಂದಿರುವ ನಾಯಕನ ಬಾಯಲ್ಲಿ ನೊರೆ ಹರಿಸುತ್ತಾ ಅನಿರೀಕ್ಷಿತ ತಿರುವು ಅಂತ್ಯವಾಗುತ್ತದೆ...

ಒಂದೇ ಕಥೆಯನ್ನು ಅವರವರ ಭಾವಕ್ಕೆ ತಕ್ಕಂತೆ ಬೆಳೆಸಿಕೊಂಡು ಹೋಗುವ ನಿಮ್ಮ ವಿನೂತನ ಪ್ರಯೋಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು

ದಿನಕರ ಮೊಗೇರ said...

ಸರ್,
ವಾವ್.... ಒಹ್...ಕೆಟ್ಟ ಕನಸು ... ಎಲ್ಲಾ ಸರಿಯಾಯಿತು ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಶಾಕ್..... ತುಂಬಾ ಚೆನ್ನಾಗಿ ಮುಂದುವರಿಸಿಕೊಂಡು ಹೋಗಿದ್ದೀರಿ....ಇಷ್ಟ ಆಯ್ತು ಸರ್........

ಅನಂತ್ ರಾಜ್ said...

ಬ್ಲಾಗ್ ಲೋಕದಲ್ಲೂ ಧಾರಾವಾಹಿ(:))- ವಿವಿಧ ಲೇಖಕರು ಮು೦ದುವರೆಸಿಕೊ೦ಡು ಹೋಗುತ್ತಿರುವ ಶೈಲಿ ಓದುಗರ ಕುತೂಹಲವನ್ನು ಉಳಿಸಿಕೊ೦ಡು ಹೋಗುತ್ತಿದೆ. ಭಾಗ-೫ ಉತ್ತಮ ತಿರುವನ್ನು ಪಡೆದುಕೊ೦ಡಿತು, ಅಭಿನ೦ದನೆಗಳು ಬದರಿ, ಹಾಗೆಯೇ ಪ್ರಕಾಶ್, ದಿನಕರ್, ಪ್ರವೀಣ್ ಹಾಗೂ ಬಾಲು ಅವರಿಗೂ ಕೂಡ. ಖೋಖೋ ಪರ೦ಪರೆಯನ್ನು ಪ್ರಾರ೦ಭಿಸಿದ ಪ್ರಕಾಶ್ ಅವರಿಗೆ ವಿಶೇಷ ಅಭಿನ೦ದನೆಗಳು.

ಅನ೦ತ್

shivu.k said...

ಬದರಿನಾಥ್ ಸರ್,
ಕತೆಯ ಮುಂದುವರಿಯನ್ನು ನೀವು ಕೂಡ ತುಂಬಾ ಚೆನ್ನಾಗಿ ಮಾಡಿದ್ದೀರಿ...ಆ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು. ಮತ್ತೆ ಇಂಥ ಪ್ರಯೋಗ ಬ್ಲಾಗ್ ಲೋಕದಲ್ಲಿ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಪ್ರತಿ ಕತೆಗಳು ಚಿಕ್ಕದಾಗಿ ಚೊಕ್ಕವಾಗಿದ್ದರೂ ಟಿ.ವಿ ಧಾರವಾಹಿಯಂತೆ ಕೊನೆಯಲ್ಲಿ ತಿರುವು ಪಡೆದುಕೊಳ್ಳುತ್ತಿವೆ.[ಇದು ಧಾರವಾಹಿಯನ್ನು ನೋಡಿದಂತೆ ಭಾಶವಾಗುತ್ತಿದೆ] ಆದ್ರೆ ನನ್ನದೊಂದು ವಿನಂತಿ ಏನೆಂದರೆ, ಹೀಗೆ ಆಗುವ ಬದಲಾಗಿ ಇದುವರೆಗೆ ಯಾವ ಧಾರವಾಹಿಯಲ್ಲು, ಸಿನಿಮಾದಲ್ಲೂ ಬಂದಿರದಂತ ಹೊಸ ಆಯಾಮವನ್ನು ಕೊಡಲು ಸಾಧ್ಯವೇ? ಹಾಗಾದರೆ ನಮ್ಮ ಬ್ಲಾಗ್ ಲೋಕದ ಸಾಧನೆಗೆ ಹೊಸ ಮೆಟ್ಟಿಲು ಸಿಕ್ಕಂತಾಗುತ್ತದೆ...ಯಾರು ಬೇಕಾದರೂ ಪ್ರಯತ್ನಿಸಬಹುದು.
ಇದು ನನ್ನ ಅನಿಸಿಕೆಯಷ್ಟೆ. ಯಾರು ತಪ್ಪು ತಿಳಿಯಬಾರದಾಗಿ ವಿನಂತಿ..

ಜಲನಯನ said...

ಬದರಿ ನಿಜಕ್ಕೂ...ದಿಕ್ಕು ಬದಲಾಯಿಸೋದ್ರಲ್ಲೇ ನಿಮಗೆ ನೀವೇ ಚಮಕಾಯಿಸಿ ಚಿಂದಿ ಉಡಾಯಿಸಿದ್ದೀರಿ...ಸೂಪರ್..ಮುಂದಿನ ಚಿಂದಿ ಚಿತ್ರಾನ್ನ ಯಾರದ್ದೋ...???

prabhamani nagaraja said...

ಬ್ಲಾಗ್ ಲೋಕದಲ್ಲಿನ ವಿವಿಧ ಲೇಖಕರ ವೈವಿಧ್ಯಮಯ ಕಲ್ಪನೆಯ ಧಾರಾವಾಹಿ ಓದುಗರ ಕುತೂಹಲವನ್ನು ಉಳಿಸಿಕೊ೦ಡು ಸಾಗುತ್ತಿದೆ. ನಿಮ್ಮ ಭಾಗ-೫ ಅನಿರೀಕ್ಷಿತ
ತಿರುವನ್ನು ಪಡೆದುಕೊ೦ಡಿದೆ! ಅಭಿನ೦ದನೆಗಳು ಬದರಿಯವರೇ , ಹಾಗೆಯೇ ಪ್ರಕಾಶ್, ದಿನಕರ್, ಪ್ರವೀಣ್ ಹಾಗೂ ಬಾಲು ಅವರಿಗೂ ಕೂಡ ನನ್ನ ಅಭಿನ೦ದನೆಗಳು.

sunaath said...

ಕತೆಯನ್ನು ಉತ್ತಮವಾಗಿ ಬೆಳೆಸಿಕೊಂಡು ಹೋಗಿ, ತರ್ಕಬದ್ಧವಾದ ಅಂತ್ಯವನ್ನು ನೀಡಿದ್ದೀರಿ. ಅಭಿನಂದನೆಗಳು.

http://santasajoy-vasudeva.blogspot.com said...

sooper :-)

ಸೀತಾರಾಮ. ಕೆ. / SITARAM.K said...

ಬಾಲುರವರು ನಾಲ್ಕು ಜನ ಬಂದರು ಎನ್ನುವಲ್ಲಿಂದ ಮುಂದುವರೆಸುವಾ ಎಂದರೆ ಅವರು ಹಾಕಿದ್ದ ಸಂಕಷ್ಟಕ್ಕೆ ತಲೆ ಕೆಡಿಸಿಕೊಂಡು ನಾಲ್ಕು ಜನ ಬರುವಲ್ಲಿ ಕಥೆ ಮುಂದುವರೆಸಲಾಗದೆ ನಾನು ಪ್ರಕಾಶರ ಕೊನೆಯಿಂದ ಸುರು ಮಾಡಿದ್ದೆ.
ತಾವು ಅಲ್ಲಿಂದಲೇ ಮುಂದುವರೆಸಿ ಚೆನ್ನಾಗಿ ಕಲ್ಪಿಸಿ ಕಥೆ ಹೊಸೆದಿದ್ದಿರಾ....