ಚಿತ : ಲಯನ್ ಜಗಪತಿರಾವ್ (೧೯೯೧)
ಹಾಡು : ಪ್ರೇಮಕೆ ಪರ್ಮಿಟ್ ಬಂತು...
ಈ ಹಾಡಿನ ಬಗ್ಗೆ ಎರಡು ಮಾತು:
೧. ’ಲಯನ್ ಜಗಪತಿರಾವ್’ ಚಿತ್ರಕ್ಕೆ ಛಾಯಾಗ್ರಹಣ ನೀಡಿದವರು ಡಿ.ವಿ. ರಾಜಾರಾಮ್. ನಾನು ಆಗ ಅಪ್ರೈಂಟೀಸ್ ಕ್ಯಾಮರಾಮೆನ್ ಆಗಿ ಅವರ ಜೊತೆ ಈ ಚಿತ್ರಕ್ಕೂ ಕೆಲಸ ಮಾಡುವ ಸೌಭಾಗ್ಯ ಪಡೆದುಕೊಂಡೆ.
೨. ಈ ಚಿತ್ರದ ನಾಯಕ ವಿಷ್ಣುವರ್ಧನ್. ಸಹಜ ಅಭಿನಯ, ಸದಾ ಚಟುವಟಿಕೆಯ ವ್ಯಕ್ತಿತ್ವ ಮತ್ತು ಶೂಟಿಂಗ್ ಸ್ಪಾಟ್ ಪೂರಾ ಓಡಾಡುತ್ತಾ ಎಲ್ಲರ ಜೊತೆ ಹರಟುತ್ತಾ ಬೆರೆತು ಹೋಗುವ ಸ್ವಭಾವ ಅವರದು.
೩. ಈ ಗೀತೆಗೆ ಟ್ರ್ಯಾಕ್ ಹಾಡಿದವರು ಸ್ವತಃ ವಿಷ್ಣು ಸರ್. ಟ್ರ್ಯಾಕನ್ನು ಸ್ಟುಡಿಯೋದಲ್ಲಿ ಟೇಪ್ ರೆಕಾರ್ಡರಿನಲ್ಲಿ ಹಾಕಿ ಕೇಳಿಸಿದರು. ನಾವೆಲ್ಲ ರೋಮಾಂಚಿತರಾದೆವು. ಎಷ್ಟಾದರೂ ಜಿಮ್ಮೀಗಲ್ಲು ಚಿತ್ರದಲ್ಲಿ ಅದ್ಭುತ ಎನಿಸುವ ಹಾಡು ಹಾಡಿ ಜನ ಮನ್ನಣೆ ಗೆದ್ದವರು ಅವರು. ಟ್ರ್ಯಾಕ್ ಸೂಪರ್ ಆಗಿ ಹಾಡಿದ್ದರು. ನಿರ್ಧೇಶಕ ಸಾಯಿ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ವಿಷ್ಣು ಸಾರ್ ಅವರನ್ನೇ ಒರಿಜಿನಲ್ ಗೀತೆಗೆ ಹಾಡುವಂತೆ ಒತ್ತಾಯಿಸಿದರು.
ಆದರೆ ವಿಷ್ಣು ಸಾರ್, ಈ ಗೀತೆಗೆ ಇನ್ನಷ್ಟು ರೊಮ್ಯಾಂಟಿಕ್ ಟಚ್ ಕೊಡಬಲ್ಲವರು ಎಸ್.ಪಿ.ಬಿ ಯವರು ಅವರಿಂದಲೇ ಹಾಡಿಸಿ ಎಂದು ಒಪ್ಪಿಸಿದರು. ಹಾಗೆ ಬಾಲು ಸರ್ ಕಂಠದಲ್ಲಿ ಮತ್ತೋಂದು ನೂರ್ಕಾಲ ನಿಲ್ಲುವ ಅದ್ಭುತ ಗೀತೆ ಮೂಡಿ ಬಂತು!
ಬೇರೊಬ್ಬ ನಟನಾಗಿದ್ದರೆ ಹೊಗಳಿಗೆಗಳಿಗೆ ಅಟ್ಟಕ್ಕೇರಿ, ತಾನೇ ಒರಿಜನಲ್ ಹಾಡನ್ನೂ ಹಾಡುತ್ತಿದ್ದರು. ಆದರೇ ಸರಳ ಸಜ್ಜನಿಕೆಯ ನಟ ವಿಷ್ಣುವರ್ಧನ್ ಹಾಡಿನ ತೂಕ ಹೆಚ್ಚಿಸಲು ಬಾಲು ಸಾರ್ ಅವರಿಂದಲೇ ಹಾಡಿಸಿದ್ದು ವಿಶೇಷ.

4 comments:
ಓಹ್ ಅಭಿನಂದನೆಗಳು !
ನಿಮ್ಮ ನೋಟ್ ಪುಸ್ತಕ ಚೆನ್ನಾಗಿದೆ ಗುರುಗಳೆ, ಪಲವಳ್ಳಿ ಡೈರಿ ಅಂದ್ರೂ ಚೆನ್ನಾಗಿರುತ್ತದೆ.
ಹನಿಗಳು ಮಳೆಯಾಗಲಿ ...
ಬದರಿನಾಥರೆ,
ವಿಷ್ಣುವರ್ಧನರು ಹಾಡಬಲ್ಲರೆನ್ನುವದು ತಿಳಿದಿರಲಿಲ್ಲ. ಅವರ ವಿಡಿಯೊ ಕ್ಲಿಪ್ಗಾಗಿ ಧನ್ಯವಾದಗಳು.
ನಿಮ್ಮ ಅನುಭವ ಚೆನ್ನಾಗಿದೆ. ನೆನಪಿನ ಪುಟಗಳಿಂದ ಒಳ್ಳೆಯ ಸನ್ನಿವೇಶ ನೀಡಿ ವಿಷ್ಣುವರ್ಧನ್ ರವರ ಸಿನಿ ಜೀವನದ ಒಳ್ಳೆಯ ಮುಖವನ್ನು ಅನಾವರಣ ಗೊಲಿಸಿದ್ದೀರಿ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Badari Sir, You have a rich collection of experiences. Please share these with us. It always feels good to know about how the legends lived in a simple way, and also about interesting experiences that you had behind the camera.
Post a Comment