ಸಾಹಿತ್ಯ ಪ್ರಕಾರಗಳಲ್ಲಿ ಸಿನಿಮಾ ಸಾಹಿತ್ಯಕ್ಕೂ ತನ್ನದೇ ಗೌರವ ಕಲ್ಪಿಸುವ ಅವಶ್ಯಕತೆಯಿದೆ.
ಯಾವುದೇ ಭಾರತೀಯ ಭಾಷೆಯ ಸಿನಿಮಾವೂ ಹಾಡುಗಳ ಹೊರತಾಗಿ ಅಪೂರ್ಣ ಅನಿಸಿಬಿಡುತ್ತದೆ. ಸಂಗೀತ-ಸಿನಿಮಾ-ಪ್ರೇಕ್ಷಕ ಎಷ್ಟರ ಮಟ್ಟಿಗೆ ಬೆಸೆದು ಹೋಗಿದ್ದರೆ ಎಂದರೆ ಸಿನಿಮಾಗಳಲ್ಲಿ ಹಾಡುಗಳನ್ನೇ ಕಲ್ಪಿಸದೇ ಕಲಾತ್ಮಕ ಚಿತ್ರಗಳೂ ಬಂದವು.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಚಿ. ಉದಯಶಂಕರ್, ವಿಜಯನಾರಸಿಂಹ, ಹುಣಸೂರು ಕೃಷ್ಣಮೂರ್ತಿ, ಆರ್.ಎನ್. ಜಯಗೋಪಾಲ್, ದೊಡ್ಡರಂಗೇಗೌಡ, ಹಂಸಲೇಖ, ಯೋಗರಾಜ್ ಭಟ್, ಜಯಂತ್ ಕಾಯ್ಕಣಿ ಮುಂತಾದ ಸಾಹಿತಿಗಳು ಅತ್ಯುತ್ತಮ ಸಾಹಿತವನ್ನು ಕೊಡುತ್ತಾ ಬಂದಿದ್ದಾರೆ.
ತೀರಾ ವಿವರಗಳಿಗೆ ಹೋಗುವ ಮುನ್ನ ಕನ್ನಡ ಹಾಡುಗಳ ಶ್ರೇಷ್ಠತೆಯ ಒಂದು ಝಲಕು:
"ಉತ್ತರ ಧ್ರುವದಿಂ ದಕ್ಷಿಣ ಧೃವಕೂ"
"ಪರದೆ ಎತ್ತಿ ಪನ್ನೀರ ಚೆಲ್ಲಿ"
"ತೇರಾ ನೇರಿ ಅಂಬರದಾಗೆ ನೇಸರ ನಗತಾನೆ"
"ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ"
"ಹೃದಯ ರಂಗೋಲಿ ಅಳಿಸುತಿದೆ ಇಂದು"
ಹೀಗೆ...
2 comments:
ನಮ್ಮ ಅನೇಕ ಚಿತ್ರಸಾಹಿತಿಗಳು ಶ್ರೇಷ್ಠ ಚಿತ್ರಗೀತೆಗಳನ್ನು ಕೊಟ್ಟಿದ್ದಾರೆ. ಅವರನ್ನು ನೀವು ಸ್ಮರಿಸಿರುವದು ಯೋಗ್ಯವಾಗಿದೆ.
ಅನೇಕ ಹಾಡುಗಳು ಯಾವ ಸಾಹಿತ್ಯಿಕ ಕವಿತೆಗಳಿಗೂ ಕಡಿಮೆಯಿಲ್ಲ. ಹಳೆ ಹಾಡುಗಳು ಬಿಡಿ, ಈಗ ಕೆಲ ಹೊಸ ಹಾಡುಗಳೂ ಸಾಹಿತ್ಯದ ದೃಷ್ಟಿಯಿಂದಲೂ ಉತ್ತಮವಾಗಿವೆ
Post a Comment